ಕಂಪ್ಲಿ ಪಟ್ಟಣದ ಷಾಮಿಯಾಚಂದ್ ಸ್ಕೂಲ್ ಆವರಣದಲ್ಲಿ ಸೆಪ್ಟಂಬರ್ 9, ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆಯೋಜನೆ ಮಾಡಲಾದ ಕಂಪ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ತಹಶೀಲ್ದಾರ್ ಮಂಜುನಾಥ್ ಹಾಗೂ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ರವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಮನೋಭಾವ ಅತ್ಯವಶ್ಯಕ ಎಂದರು.ಒಟ್ಟು 7 ಕಾಲೇಜು ಹಾಗೂ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇನ್ನು ಈ ಕ್ರೀಡಾಕೂಟವನ್ನು ಮದರ್ ತೆರಾಸಾ ಪಿಯು ಕಾಲೇಜು ರವರು ಸಂಯುಕ್ತ ಆಶ್ರಯವಹಿಸಿದ್ದರು.ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಖೋ ಖೋ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.