ಧರ್ಮಸ್ಥಳದ ನೂರಾರು ಶವ ಹೂತಿಟ್ಟ ಅನಾಮಿಕ ಆರೋಪ ಎಸ್ಐಟಿ ತನಿಖೆ ವಿಚಾರದ ಬಳಿಕ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರ ವಿರುದ್ಧವಾಗಿ ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಧರ್ಮ ರಕ್ಷಾ ಜಾಥಾ ಕೈಗೊಳ್ಳಲಾಯಿತು.ಮಾಸ್ತ್ಯಾಂಬಿಕಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜಾಥಾಗೆ ಚಾಲನೆಯನ್ನು ನೀಡಲಾಯಿತು. 254 ಕಾರು ಹಾಗೂ 5 ಟಿ.ಟಿ ವಾಹನಗಳಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.