ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ, ದಾವಣಗೆರೆ ಮೂಲದ ಮಹಿಳೆ ಒಬ್ಬರು 26 ಕೆಜಿ ತೂಕದ ಜೋಳದ ಮೂಟೆಯನ್ನು ಹೊತ್ತುಕೊಂಡು 575 ಮೆಟ್ಟಿಲುಗಳನ್ನು ಹತ್ತಿ ಅಂಜನಾದ್ರಿ ಆಂಜನೇಯನ ದರ್ಶನವನ್ನು ಪಡೆದಿದ್ದಾರೆ. ಮಹಿಳೆಯ ಈ ಒಂದು ಭಕ್ತಿಗೆ ದೇವಸ್ಥಾನದಲ್ಲಿ ನೆರೆದಿದ್ದ ಆಂಜನೇಯನ ಭಕ್ತರು ನಿಬ್ಬೆರಗಾಗಿದ್ದಾರೆ..