ಮಳವಳ್ಳಿ : ಪಶು ಆಹಾರದ ಬದಲು ಯೂರಿಯಾ ರಸಗೊಬ್ಬರ ವನ್ನು ತಿಂದು ಮೂರು ಹಸುಗಳು ಸಾವನ್ನಪ್ಪಿರುವ ದುರ್ಘಟನೆ ಮಳವಳ್ಳಿ ತಾಲ್ಲೂಕಿನ ನದೊಡ್ಡಿ ಗ್ರಾಮದಲ್ಲಿ ಜರುಗಿದೆ. ಈ ಗ್ರಾಮದ ಸಿದ್ದಲಿಂಗೇಗೌಡರಿಗೆ ಸೇರಿದ ಎರಡು ನಾಟಿ ಹಸು ಹಾಗೂ ದೈತೇಗೌಡನ ಮಹದೇವ ಎಂಬುವರಿಗೆ ಸೇರಿದ ಫಲ ಭರತಿ ಒಂದು ಸೀಮೆ ಹಸು ಸಾವನ್ನಪ್ಪಿದ್ದು ಮಂಗಳವಾರ ಮುಂಜಾನೆ 5.30 ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಎಂದಿನಂತೆ ಮುಂಜಾನೆ ಕೊಟ್ಟಿಗೆ ಯಿಂದ ಹಸುಗಳನ್ನು ಹೊರಬಿಟ್ಟ ಕೂಡಲೇ ಹಿತ್ತಲಿನ ಹೊರಾಂಡದಲ್ಲಿ ಒಂದೇ ಕಡೆ ಪಶು ಆಹಾರ ಹಾಗೂ ಯೂರಿಯಾ ರಾಸಾಯನಿಕ ಗೊಬ್ಬರವನ್ನು ಜೋಡಿಸಿಟ್ಟಿದ್ದ ಕಡೆ ಬಂದ ಹಸುಗಳು ಪಶು ಆಹಾರ ಎಂದು ಯೂರಿಯಾ ರಸಗೊಬ್ಬರ ದ ಚೀಲಕ್ಕೆ ಬಾಯಿ ಹಾಕಿ ಯೂರಿಯಾವನ್ನು ತಿಂದು ಬಿಟ್ಟಿದ್ದವು ಎನ್ನಲಾಗಿದೆ.