ಗುಂಡ್ಲುಪೇಟೆ: ರೈತರು ತಮ್ಮ ಕಸಬಿಗೆ ನ್ಯಾಯ ಸಿಗದೆ ಬೇಸತ್ತಿದ್ದಾರೆ. ಬಂಡವಾಳ ಶಾಹಿಗಳು ವಿವಿಧ ಆಮಿಷಗಳ ಮುಖೇನಾ ರೈತರ ಭೂಮಿ ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ. ಈ ಹೊಡೆತದಿಂದಲೆ ಎಷ್ಟೋ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಕಳವಳಕಾರಿಯಾಗಿದೆ,” ಎಂದು ರೈತ ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರ ಗ್ರಾಮದಲ್ಲಿ ನಡೆದ ರೈತ ಸಂಘಟನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಂಡವಾಳ ಶಾಹಿಗಳು ಇಲ್ಲಸಲ್ಲದ ಆಸೆಗಳ ಮುಖೇನ ರೈತರನ್ನು ಮರುಳುಗೊಳಿಸುತ್ತಿದ್ದಾರೆ.ನವೀನ ಕೃಷಿ ಮಾದರಿ" ಹೆಸರಿನಲ್ಲಿ ಭೂಮಿ ಕಸಿಯುವ ಸಡಿಲ ಹುನ್ನಾರ ನಡೆಯುತ್ತಿದೆ.ರೈತರಿಗೆ ನ್ಯಾಯ ಸಿಗದಂತೆ ಆಂತರಿಕವಾಗಿ ಮತ್ತೊಂದು ಚಳವಳಿ ನಡೆಯುತ್ತಿದೆ.ಎಂದರು