ನಂಜನಗೂಡು: ಮೀನು ಸಾಕಣಿಕೆಗೆ ಮೀಸಲಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾದ ನೀರು ತುಂಬಿದ ಹೊಂಡಗಳಲ್ಲಿ ಶಾಲಾ ಮಕ್ಕಳು ಆಟವಾಡಲು ಇಳಿಯುತ್ತಿದ್ದಾರೆ.ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನಲೆ ಮಕ್ಕಳು ಲೀಲಾಜಾಲವಾಗಿ ನೀರಿಗೆ ಇಳಿದು ಜಲಕ್ರೀಡೆಯಲ್ಲಿ ತೊಡಗಿದ್ದಾರೆ.ಯಾವುದೇ ಅನಾಹುತ ಸಂಭವಿಸಿದರೂ ಹೊಣೆ ಯಾರು ಎಂಬುದು ಪ್ರಶ್ನೆಯಾಗಿದೆ. ನಂಜನಗೂಡಿನ ಹೃದಯಭಾಗದಲ್ಲಿರುವ ಮೀನುಗಾರಿಕೆ ಸಹಾಯ ನಿರ್ದೇಶಕರ ಕಚೇರಿಯಲ್ಲಿ ಕಾಣುವ ದೃಶ್ಯಗಳು ಇವು.ಸರ್ಕಾರಿ ಕಚೇರಿಯಲ್ಲಿ ಮೀನು ಸಾಕಾಣಿಕೆಗಾಗಿ ಆವರಣದಲ್ಲೇ ಹೊಂಡಗಳನ್ನ ನಿರ್ಮಿಸಲಾಗಿದೆ.ಸುಮಾರು ನಾಲ್ಕು ಅಡಿ ಆಳದ ಹೊಂಡಗಳು ನಿರ್ಮಾಣವಾಗಿ ವರ್ಷಗಳೇ ಕಳೆದಿದೆ.ಮೀನು ಸಾಕಾಣಿಕೆ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ.