ತಾಲೂಕಿನ ದಮ್ಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯೊಂದು ಜಿಂಕೆಯನ್ನು ಬೇಟೆಯಾಡುವ ಹಾಗೂ ಮತ್ತೊಂದು ಹುಲಿ ಬೇಟೆ ಹೊಂಚು ಹಾಕಿದ ದೃಶ್ಯಗಳು ಪ್ರವಾಸಿಗರ ಕ್ಯಾಮೆರಾಕ್ಕೆ ಸೆರೆಯಾಗಿದೆ. ದಮ್ಮನಕಟ್ಟೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಈಗ ದಿನ ನಿತ್ಯ ಒಂದಲ್ಲಾ ಒಂದು ಹುಲಿಗಳು ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ರಂಜಿಸುತ್ತಿವೆ. ಹುಲಿಗಳ ದರ್ಶನದಿಂದಾಗಿ ದಮ್ಮನಕಟ್ಟೆ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.