ಮದುವೆಯಾಗು ಅಂದಿದಕ್ಕೆ ಪ್ರೇಯಸಿಯನ್ನು ಕೊಲೆ ಮಾಡಿ ಹೂತುಹಾಕಿ ಆರು ತಿಂಗಳ ನಂತರ ಪ್ರಕರಣ ಬಯಲಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದ ಯುವತಿ ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಮಧುಶ್ರಿ ಅಂಗಡಿ. ಇನ್ನು ಕೊಲೆ ಮಾಡಿದ ಪ್ರಿಯಕರ ಅದೇ ಗ್ರಾಮದ ಸತೀಶ್ ಹಿರೇಮಠ. ಇದೊಂದು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಕೊಲೆ ಪ್ರಕರಣವಾಗಿದೆ. ಪೊಲೀಸರ ಚಾಣಾಕ್ಷತನದ ತನಿಖೆಯಿಂದ 6 ತಿಂಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡ್ತಾಯಿದ್ದ ಕಿಲಾಡಿ ಆರೋಪಿ ಸತೀಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.