ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಹೆಚ್ಚು ದರ ಪಡೆಯುವ ಜೊತೆಗೆ ಸರ್ಕಾರ ನೀಡುವ ಐದು ರೂ. ಪ್ರೋತ್ಸಾಹಧನವನ್ನು ಪಡೆಯಬಹುದಾಗಿದೆ ಎಂದು ಬಮೂಲ್ ವಿಸ್ತರಣಾಧಿಕಾರಿ ಸಿ ಶ್ರೀಧರ್ ಹೇಳಿದರು. ತಾಲೂಕಿನ ಗುವ್ವಾಪುರ ಗ್ರಾಮದ ಎಂಪಿಸಿಎಸ್ ವಾರ್ಷಿಕ ಮಹಾಸಭೆಯನ್ನ ಮಂಗಳವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 3.5 ಎಸ್ ಎನ್ ಎಫ್ ಹೊಂದಿರುವ ಹಾಲನ್ನು ಮಾತ್ರವೇ ಸ್ವೀಕರಿಸಬೇಕು ಎನ್ನುವ ನಿಯಮ ಶೀಘ್ರ ಜಾರಿಯಾಗಲಿದೆ, ಅದಕ್ಕಿಂತ ಕಡಿಮೆ ಎಸ್ ಎನ್ ಎಫ್ ಬಂದರೆ ಹಾಲನ್ನು ಸ್ವೀಕಾರ ಮಾಡಬಾರದು ಎನ್ನುವ ನಿಯಮ ಇದೆ ಎಂದರು.