ಆಲೆಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 15 ಲಕ್ಷ ರೂಗಳಿಗೂ ಹೆಚ್ಚು ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರದ ಸೋಮವಾರಪೇಟೆ ಬಳಿ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಕೊಡುಗೆ ಜಮೀನು ಇದನ್ನು ವಿ. ಧರ್ಮೇಂದ್ರ ಎಂಬುವವರು ಆಲೆ ಮನೆ ನಡೆಸುತ್ತಿದ್ದರು, ಮಂಗಳವಾರ ಬೆಲ್ಲ ತಯಾರಿಸುವ ವೇಳೆ ಆಕಸ್ಮಿಕ ಬೆಂಕಿಯಿಂದ ಆಲೆಮನೆ ಒಳಗಡೆ ಇದ್ದ 10,000 ಬೆಲ್ಲ, ಎರಡು ಮೋಟಾರ್, ಎರಡು ಗಾಣ, ಹಾಗೂ 6, ಲಕ್ಷ ರು ಮೌಲ್ಯದ ಸಂಪೂರ್ಣ ಸೆಡ್ಡು ಸೇರಿದಂತೆ ಒಟ್ಟು 15 ಲಕ್ಷ ರೂಗಳಿಗೂ ಹೆಚ್ಚು ನಷ್ಟ ಉಂಟಾಗಿದೆ, ಎಂದು ಆಲೆಮನೆ ಮಾಲೀಕ ಈ ಧರ್ಮೇಂದ್ರ ತಿಳಿಸಿದ್ದಾರೆ.