ನಗರದಲ್ಲಿ ಮನೆಯೊಂದರೊಳಗೆ ಅಪರೂಪದ ಗೋಲ್ಡನ್ ಬಣ್ಣದ ರೆಸರ್ಲ್ ವೈಫರ್ ವಿಷಕಾರಿ ಹಾವು ಕಂಡುಬಂದಿದ್ದು, ಹಾವುಗಳನ್ನು ಉಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ಶೇಷಪ್ಪ ಅವರು ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಪ್ರಾಣರಕ್ಷಣೆ ಮಾಡಿದ್ದಾರೆ.ಹಾವುಗಳ ರಕ್ಷಣೆ ಹಾಗೂ ಪತಂಜಲಿ ಯೋಗ ಸಮಿತಿಯಲ್ಲಿ ಯೋಗ ತರಬೇತುದಾರರಾಗಿ ಸಮಾಜ ಸೇವೆ ಮಾಡುತ್ತಿರುವ ಶೇಷಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕಳೆದ 20 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಕಳೆದ ರಾತ್ರಿ ನಮ್ಮ ಸ್ನೇಹಿತ ಭಾನುಪ್ರಕಾಶ ಅವರ ಮನೆಯಲ್ಲಿ ಚಿಕ್ಕ ಮರಿ ಹಾವು ಕಂಡುಬಂದಿತ್ತು. ಅದೇ ರೆಸರ್ಲ್ ವೈಫರ್ ಎಂಬ ಅಪರೂಪದ ಹಾವು. ಸಾಮಾನ್ಯವಾಗಿ ಈ ಹಾವುಗಳು ಕ