ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ ಗುಂಡ್ಲುಪೇಟೆ ಪುರಸಭೆ ವತಿಯಿಂದ ಸಂಪೂರ್ಣ ಸ್ವಚ್ಛ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ನಿಮ್ಮ ಮನೆಯಲ್ಲಿ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಪುರಸಭೆ ಆಟೋಗಳಿಗೆ ಕೊಡಿ, ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸಬೇಡಿ, ಚರಂಡಿ, ಒಳಚರಂಡಿ, ಬೀದಿ ದೀಪ ಈ ರೀತಿ ಸಮಸ್ಯೆ ಇದ್ದಾರೆ ಕೂಡ ವಾಟ್ಸಾಪ್ ಗೆ ಕಳುಹಿಸಿ 24 ಗಂಟೆಯೊಳಗೆ ಅದನ್ನು ಪರಿಹಾರವನ್ನು ಪುರಸಭೆಯವರು ಮಾಡುತ್ತಾರೆ ನಮ್ಮ ಗುಂಡ್ಲುಪೇಟೆ ಸ್ವಚ್ಚವಾಗಿಡಲು ಎಲ್ಲಾ ಸಾರ್ವಜನಿಕರು ಸಹಕರಿಸಬೇಕೆಂದರು.