ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯ್ದೆ-2006 ರನ್ವಯ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಸರಬರಾಜು ಮಾಡಿದ ವಸ್ತುಗಳು ಅಥವಾ ಸೇವೆಗಳಿಗೆ ಖರೀದಿದಾರರು ದಿನಾಂಕದೊಳಗೆ ಪಾವತಿ ಮಾಡಲು ವಿಳಂಬ ಆದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬoಧ ಸಂಧಾನ ನಡೆಸಲಾಯಿತು. ಇಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್.ಯುಕೇಶ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ 24 ನೇ ಎಂ.ಎಸ್.ಇ.ಎಫ್.ಸಿ ಸಂಧಾನ ಸಭೆಯಲ್ಲಿ ಕೈಗಾರಿಕೆಗಳಿಗೆ ವಿಳಂಬ ಪಾವತಿಗೆ ಸಂಬoಧಿಸಿದoತೆ ಒಟ್ಟು 20 ಪ್ರಕರಣಗಳನ್ನು ಸಂಧಾನಕ್ಕೆ ಹಾಜರು ಪಡಿಸಲಾಯಿತು.