ಗಣೇಶೋತ್ಸವ ಹಾಗೂ ಈಶ ಮಿಲಾದ ಹಬ್ಬದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಅಮೀನಗಡ ಮತ್ತು ಕಮತಗಿ ಪಟ್ಟಣಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ಸಲುವಾಗಿ ಪೊಲೀಸ್ ಪಥ ಸಂಚಲನ ಕೂಡ ನೆರವೇರಿಸಲಾಗಿದೆ.ಇನ್ನು ಪಟ್ಟಣದ ಆಯಕಟ್ಟಿನ ಪ್ರದೇಶಗಳಲ್ಲಿ ಡಿಆರ್ ತುಕಡಿ ನಿಯೋಜಿಸಲಾಗಿದ್ದು ಶಾಂತಿಯಿಂದ ಹಬ್ಬಗಳನ್ನ ಆಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.