ವೈವಿಧ್ಯತೆಯಿಂದ ಮನೆಯಲ್ಲಿ ಏಕತೆಯ ದೀಪ ಹಚ್ಚಿ ಗಣೇಶ ಹಬ್ಬ ಆಚರಣೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಧಾರ್ಮಿಕ ಸಾಮರಸ್ಯ ಸಾಕ್ಷಿಯಾಗಿದೆ. ಸ್ವಿಜರ್ಲ್ಯಾಂಡ್‌ನಿಂದ ಬಂದಿರುವ ಕ್ರೈಸ್ತ ಧರ್ಮೀಯ ಮಾರ್ಟಿನ್ ಅವರು ದಸ್ತಗೀರ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ಬುಧವಾರ ಗಣೇಶ ಚತುರ್ಥಿ ಹಬ್ಬವನ್ನು ಅದೇ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆಚರಿಸಿದರು ಈ ಕಾರ್ಯಕ್ರಮಕ್ಕೆ ಕೆಲವು ಮುಸ್ಲಿಂ ಯುವಕರು ಸಹ ಕೈಜೋಡಿಸಿ ಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸಿದ್ದಾರೆ ಆಗಸ್ಟ್ 28 ರಂದು ಮಧ್ಯಾಹ್ನ 3-30 ಗಂಟೆಗೆ ವಿಡಿಯೋ ಪೋಟೊ ಮಾಧ್ಯಮಕ್ಕೆ ಲಬ್ಯವಾಗಿದೆ