ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಜುಮನ್ ಕಮಿಟಿಗೆ ಚುನಾವಣೆಯ ದಿನಾಂಕ ಕೊನೆಗೂ ಘೋಷಣೆ ಆಗಿದೆ. ಚುನಾವಣೆ ಕುರಿತು ಅವಳಿ ನಗರದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅಂಜುಮನ್ ಚುನಾವಣೆ ಯಾವಾಗ ಅಂತ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದರು. ಇದಕ್ಕೆ ಈಗ ಉತ್ತರ ಲಭಿಸಿದ್ದು, ಸೆಪ್ಟೆಂಬರ್ 28ರಂದು ಅಂಜುಮನ್ ಕಮಿಟಿ ಚುನಾವಣೆ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ತೌಶಿಪ್ ಮಾಹಿತಿ ನೀಡಿದ್ದಾರೆ.