ಕಲಬುರಗಿ : ಕಲಬುರಗಿ ನಗರದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ನಗರದ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದೆ.. ಆಗಷ್ಟ್ 29 ರಂದು ಮಧ್ಯಾನ 12.30 ಕ್ಕೆ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಹಿಂದೂ ಯುವಕರು ಮುಸ್ಲಿಂ ಹುಡುಗಿಯರಿಗೆ ಡ್ರಾಪ್ ಕೊಟ್ಟಾಗ ಮುಸ್ಲಿಂ ಯುವಕರು ಮನಬಂದಂತೆ ಥಳಿಸಿ ಕಾನೂನು ಕೈಗೆತ್ತಿಕೊಳ್ತಿದ್ದು, ಕಳೆದ ಎರಡು ತಿಂಗಳಲ್ಲಿ ಇಂತಹ ಪ್ರಕರಣಗಳು ನಾಲ್ಕು ಜರುಗಿವೆ.. ಕೂಡಲೇ ನೈತಿಕ ಪೊಲೀಸ್ ಗಿರಿ ಮಾಡ್ತಿರೋರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ಹಿಂದೂ ಜಾಗೃತಿ ಸೇನೆ ಮನವಿ ಸಲ್ಲಿಸಿದೆ..