ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮದ್ದೂರಿನಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ ಕುರಿತಂತೆ ಶುಕ್ರವಾರ ಮಧ್ಯಾಹ್ನ 1:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಹಿಂದೂಗಳ ಮೇಲೆ ಅವರಿಗೆ ಮಾತ್ರವೇ ಪ್ರೀತಿ ಇರೋ ತರ ಬಿಜೆಪಿ ನಾಯಕರು ನಿನ್ನೆ ಮದ್ದೂರಿನಲ್ಲಿ ಅಬ್ಬರಿಸಿದರು, 2024ರಲ್ಲಿ ಹಿಂದೂ ರಿಲೀಜಿಯಸ್ ಬಿಲ್ ಪಾಸ್ ಮಾಡಿದ್ವಿ, ಆ ಬಿಲ್ ಓದಿಕೊಂಡಿದ್ರಾ ಇವರು, ಹಿಂದೂ ರಿಲಿಜಿಯಸ್ ಬಿಲ್ ನಲ್ಲಿ ಒಂದು ಕೋಟಿಗೂ ಹೆಚ್ಚಾಗಿರುವ ದೇವಾಲಯದಿಂದ ಫಂಡ್ ಕಲೆಲ್ಟ್ ಮಾಡ್ತೀವಿ.ಕಾಮನ್ ಪೂಲ್ ಫಂಡ್ ಏನಕ್ಕೆ ಬಳಸ್ತಾರೆ ಗೊತ್ತಾ..? ರಾಜ್ಯದಲ್ಲಿ 66,232 ಹಿಂದೂ ಟೆಂಪಲ್ ಇದೆ. ಅದರಲ್ಲಿ 33 ಸಾವಿರ ಮುಜರಾಯಿ ಟೆಂಪಲ್ಸ್ ಇದೆ. 50 ಸಾವಿರ ಜನ ಅರ್ಚಕರು ಇದಾರೆ.