ಶಿರಸಿ ತಾಲೂಕಿನಲ್ಲಿ ಮಂಗಳವಾರ ಸಂಜೆ 6 ರವೆರಗೆ ಸುರಿದ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಇಂದಿರಾನಗರದ ಹುತೆಜಾಬಿ ಇವರ ವಾಸ್ತವ್ಯದ ಮನೆ ಕುಸಿದಿದೆ. ಕೂರ್ಸೆಯ ಸೋಮು ಸುಬ್ಬ ಗೌಡ ಎಂಬುವವರ ಮನೆಯ ಮೇಲೆ ಮರ ಮುರಿದು ಬಿದ್ದು 15 ಸಾವಿರ ರೂ. ನಷ್ಟವಾಗಿದೆ. ನುರಕಲಕೊಪ್ಪದ ಲಕ್ಷ್ಮೀ ಎನ್ನುವವರ ಮನೆಯ ಮೇಲ್ಪಾವಣಿ ಹಾಗೂ ಗೋಡೆ ಕುಸಿದು 60 ಸಾವಿರ ರೂ. ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.