ರಾಯಚೂರ ನಗರದಲ್ಲಿ ರುಪ್ಸಾ ಕರ್ನಾಟಕ ರಾಯಚೂರು ತಾಲೂಕ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಜಂಗ್ಲೆಪ್ಪಗೌಡ ತಿಳಿಸಿದರು. ರಾಯಚೂರು ನಗರದ ಪತ್ರಿಕ ಭವನದಲ್ಲಿ ಮಂಗಳವಾರ ಮಧ್ಯಾನ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಯಚೂರು ನಗರದ ಎರ್ಮರ ಬಳಿ ಇರುವ ಅಫ್ತಾಬ್ ಶಾದಿ ಮಹಲ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಕುರಿತು ವಿವರಿಸಿದರು.