ಶರಣರು ಹಾಗೂ ದಾಸರು ಸಂಗೀತ ಅಳವಡಿಸಿಕೊಂಡು ಹಾಡುವ ಮೂಲಕ ವಚನಗಳನ್ನ ಜನಮಾನಸದಲ್ಲಿ ಉಳಿಸಿದ ರೀತಿಯಲ್ಲಿಯೇ ಅವದೂತ ಅಂಜನಪ್ಪ ಸ್ವಾಮೀಜಿ ಸಹ ಇದೆ ಮಾದರಿ ಅನುಸರಿಸಿದರು ಎಂದು ಸಿದ್ದಾರೂಢ ಮಠದ ನಿಕಟಪೂರ್ವ ಅಧ್ಯಕ್ಷರು ಆದ ನಿವೃತ್ತ ಡಿವೈಎಸ್ ಪಿ ಡಿ. ಡಿ. ಮಾಳಗಿ ಹೇಳಿದರು.ತುಮಕೂರು ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 1.30 ರ ಸಮಯದಲ್ಲಿ ದುರ್ಗಾಂಬಿಕಾ ಸೇವಾ ಟ್ರಸ್ಟ್ ಹಾಗೂ ಶ್ರೀ ದೇವಿ ಶಿಕ್ಷಣ ಸಂಸ್ಥೆ ಟ್ರಸ್ಟ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವಿ ರಮಣ ಮಹರ್ಷಿ ಪುರಸ್ಕಾರ ಹಾಗೂ ಗ್ರಂಥ ಲೋಕಾರ್ಪಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು