50 ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಈ ಕುರಿತಾದ ಮಾಹಿತಿ ಶನಿವಾರ ಲಭ್ಯವಾಗಿದೆ. ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ ದಾರಿ ಉದ್ದಕ್ಕೂ ಜಲ್ಲಿಕಲ್ಲು ಗುಂಡಿ ತುಂಬಿದ ರಸ್ತೆ ಕಾಣುತ್ತಿದ್ದು ಮಳೆ ಆಗಿರುವುದರಿಂದ ಹೆಸರುಗದ್ದೆಯಂತೆ ನಿರ್ಮಾಣವಾಗಿದೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ನೋಡಿ ಆಂಬುಲೆನ್ಸ್ ಕೂಡ ಬರಲು ನಿರಾಕರಿಸುತ್ತಿದೆ. ಶಾಲಾ ಮಕ್ಕಳು ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.