ಹುಚ್ಚುನಾಯಿಯೊಂದು ಅಂಧ ವಿದ್ಯಾರ್ಥಿಗಳನ್ನ ಸೇರಿ ಒಟ್ಟು ಹದಿನೈದು ಜನರನ್ನ ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆಯ ನವನಗರದ ಸಜೀವಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನ ಹಾಗೂ ಶಾಲೆಯ ಸಿಬ್ಬಂದಿ ಮತ್ತು ಇತರರನ್ನ ನವನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಕಳೆದ ದಿನವೂ ಹುಚ್ಚುನಾಯಿ ಅಂಧ ವಿದ್ಯಾರ್ಥಿನಿಯನ್ನ ಕಡಿದು ಗಾಯಗೊಳಿಸಿದೆ.ಇಂದು ಮತ್ತೆ ಹುಚ್ಚು ನಾಯಿಯ ದಾಳಿ ಮುಂದುವರೆಸಿ ಇದು ಬರೆಗೆ ಹದಿನೈದ ಜನರನ್ನ ಕಚ್ಚಿ ಗಾಯಗೊಳಿಸಿದೆ.