ಲಾರಿ, ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬಾಲಕ ಮೃತಪಟ್ಟು ಮೂವರು ಬಾಲಕರ ಸ್ಥಿತಿ ಚಿಂತಾಜನಕವಾದ ಘಟನೆ ಚಾಮರಾಜನಗರದ ಗಾಳಿಪುರ ಬೈಪಾಸ್ ನಲ್ಲಿ ಶನಿವಾರ ನಡೆದಿದೆ. ಚಾಮರಾಜನಗರದ ಕೆ.ಪಿ.ಮೊಹಲ್ಲಾದ ಮೆರಾನ್( 10) ಮೃತಪಟ್ಟ ಬಾಲಕ. ಮೆರಾನ್ ನ ಅಣ್ಣ ಫೈಜಲ್, ಅದಾನ್ ಪಾಷಾ ಹಾಗೂ ರಿಯಾಸ್ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕಾರಿನ ಚಾಲಕ ಶ್ರೀಕಾಂತ್ (22) ಹಾಗೂ ಮಣಿಕಾಂತ್(45) ಎಂಬಿಬ್ಬರಿಗೆ ಗಾಯಗಳಾಗಿದ್ದು ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೇ ಬೈಕ್ ನಲ್ಲಿ ನಾಲ್ವರು ಬಾಲಕರು ಸವಾರಿ ಮಾಡುತ್ತಿದ್ದಾಗ ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬೈಕ್ ಸವಾರರಿಗೆ ಗುದ್ದಿದ್ದು ಬೈಕ್ ಲಾರಿ ಕೆಳಕ್ಕೆ ಸಿಲುಕಿ ಈ ಅವಘಡ ಉಂಟಾಗಿದೆ.