ಒಂದೇ ಸ್ಥಳದಲ್ಲಿ ಒಂದಲ್ಲ- ಎರಡಲ್ಲ 13 ಕ್ಕೂ ಅಧಿಕ ಕಾಡಾನೆ ಹಿಂಡು ಪ್ರವಾಸಿಗರಿಗೆ ದರ್ಶನ ನೀಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ. ಪ್ರವಾಸಿಗನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದ್ದು ಬರೋಬ್ಬರಿ 13 ಕಾಡಾನೆಗಳ ಕಂಡ ಸಫಾರಿಗರು ದಿಲ್ ಖುಷ್ ಆಗಿದ್ದಾರೆ. ಒಂದೆರೆಡು ಆನೆಗಳನ್ನು ಸಾಮಾನ್ಯವಾಗಿ ನೋಡುತ್ತಿದ್ದ ಸಫಾರಿಗರು ಸ್ವಚ್ಛಂದವಾಗಿ ಮೇಯುತ್ತಿದ್ದ ಗಜಪಡೆ ಫ್ಯಾಮಿಲಿಯನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆ, ಹುಲಿ ಹೊಂದಿರುವ ಸಂರಕ್ಷಿತಾರಣ್ಯವಾಗಿರುವ ಬಂಡೀಪುರದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.