ಅಗಸ್ಟ್ 25, ಸೋಮವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಬಂಡಿಹಟ್ಟಿಯ ನಿವಾಸಿ ಮಲ್ಲಿಕಾರ್ಜುನ ತನ್ನ ಮನೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ತಕ್ಷಣವೇ ವೈದ್ಯಕೀಯ ನೆರವಿಗೆ ಒಯ್ಯಲಾಗಿದ್ದರೂ ಜೀವ ಉಳಿಯಲಿಲ್ಲ.ಮೂರೂ ವರ್ಷಗಳಿಂದ ಮಲ್ಲಿಕಾರ್ಜುನ ಪೊಲೀಸ್ ಜಿಮ್ ಖಾನ್ ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದ್ದನು ಎನ್ನಲಾಗಿದೆ.ಉತ್ತಮ ದೇಹಸೌಷ್ಟವ ಮತ್ತು ಆರೋಗ್ಯ ಹೊಂದಿದ್ದ ಯುವಕ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನನ ನಿಧನಕ್ಕೆ ಬಳ್ಳಾರಿ ಕ್ರೀಡಾ ಮತ್ತು ಬಾಡಿಬಿಲ್ಡಿಂಗ್ ವಲಯದಲ್ಲಿ ಆಘಾತ ವ್ಯಕ್ತವಾಗಿದೆ