ಜಿಲ್ಲೆಯಲ್ಲಿ ಹಾಕಲಾದ ಹತ್ತಿ ಬೆಳೆಯನ್ನ ಹಸಿರು ಕೀಟ ಕಿತ್ತು ತಿನ್ನುತ್ತಿದೆ. ಕ್ರಿಮಿನಾಶಕ ಸಿಂಪರಣೆ ಮಾಡಿದರೂ ಹಸಿರು ಕೀಟಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಾರಿ ಮೇಲಿಂದ ಮೇಲೆ ಮಳೆ ಸುರಿದ ಕಾರಣ ಕ್ರಿಮಿನಾಶಕ ಸಿಂಪರಣೆ ಮಾಡಲೂ ಕೂಡ ಮಳೆರಾಯ ಬಿಡುವು ನೀಡಲಿಲ್ಲ. ಇದರ ಪರಿಣಾಮ ಒಂದೊಂದು ಹತ್ತಿ ಗಿಡಕ್ಕೆ ಐದಾರು ಹಸಿರು ಕೀಟಗಳು ಆವರಿಸಿ ಹತ್ತಿ ಎಲೆ ಮತ್ತು ಫಲ ಕಿತ್ತು ತಿನ್ನುತ್ತಿದೆ. ಕೀಟಗಳು ನಿಯಂತ್ರಣಕ್ಕೆ ಬಾರದೆ ಹೋದರೆ ಹತ್ತಿ ಕಾಯಿಗಳ ಒಳಗೆ ಕೀಟ ನುಗ್ಗಿ ಸಂಪೂರ್ಣ ತಿಂದು ಹಾಕುವ ಭೀತಿ ರೈತರು ವ್ಯಕ್ತಪಡಿಸಿದ್ದಾರೆ. ಇದೀಗ ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದು, ಸೆ.8ರ ಸೋಮವಾರ ಬೆಳಗ್ಗೆ 10 ಗಂಟೆಗ ರೈತರು ದುಬಾರಿ ಹಣ ವ್ಯಯಿಸಿ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿರುವುದು ಕಂಡು ಬಂದಿತು.