ಪಟ್ಟಣದ ಪುರಸಭೆ ಸದಸ್ಯರೊಬ್ಬರ ಮೇಲೆ ವಕೀಲರೊಬ್ಬರು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.ಇಬ್ಬರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುರಸಭೆ ಸದಸ್ಯ ವೈ.ಸುನೀಲ್ ಕುಮಾರ್ ರವರ ಮೇಲೆಯೇ ವಕೀಲ ನಾರಾಯಣಪ್ಪ ಹಲ್ಲೆ ಮಾಡಿ ಗಾಯಗೊಳಿಸಿದ್ದು,ಕಾರಹಳ್ಳಿ ಗ್ರಾಮದಲ್ಲಿರುವ 5 ಗುಂಟೆ ಜಮೀನನ್ನು ವಕೀಲ ನಾರಾಯಣಪ್ಪ ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದರು.ಇದರ ವಿರುದ್ಧ ಸುನೀಲ್ ಕುಮಾರ್ ದೂರು ನೀಡಿದ್ದರಿಂದ ನಾರಾಯಣಪ್ಪ ಮೇಲೆ 420 ಪ್ರಕರಣ ದಾಖಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣಪ್ಪ ಜಾಮೀನು ಸಹ ಪಡೆಯದೆ ಕಳೆದ 5 ವರ್ಷದಿಂದ ಇದ್ದರೂ ಪೊಲೀಸರು ಯಾವುದೇ ಕ್ರಮ ವಹಿಸಿಲ್ಲ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.