ಹೊಟೆಲ್ ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನಿಗೆ ಕೂಡಿ ಹಾಕಿ ಟಾರ್ಚರ್ ನೀಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಖಾನಾಪುರ ತಾಲೂಕಿನ ಮಾಣಿಕವಾಡಿ ನಿವಾಸಿ ವೆಂಕಪ್ಪ ಮೈಯೆಕರ(18)ಸಾವನ್ನಪ್ಪಿರುವ ಯುವಕನಾಗಿದ್ದು ಈತ ಖಾನಾಪುರ ಹೊರ ವಲಯದ ಸ್ವರಾಜ್ ಹೋಟೆಲ್‌ನಲ್ಲಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡ್ತಿದ್ದ ಹೋಟೆಲ್ ಮಾಲೀಕರು ಆ.20ರಂದು ಕಳ್ಳತನ ಆರೋಪ ಹೊರಿಸಿ ಟಾರ್ಚರ್ ನೀಡಿ ಹಲ್ಲೆ ಮಾಡಿದ್ದಾರೆ ಹೊಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ ಹಾಗೂ ಸಹೋದರ ವಿಜಯ್ ಬೆಡರೆ ಯಿಂದ ಹಲ್ಲೆ ಮಾಡಿದ್ದಾರೆಂದು ಇಂದು ಶುಕ್ರವಾರ 12 ಗಂಟೆಗೆ ನಗರದ ಬಿಮ್ಸ್ ಶವಾಗಾರದ ಮುಂದೆ ಮೃತ ಯುವಕನ ಕುಟುಂಬಸ್ಥರು ಆರೋಪ.