Download Now Banner

This browser does not support the video element.

ಹಳಿಯಾಳ: ಮೈಸೂರು ದಸರಾ ಕೇಸರಿ ಪ್ರಶಸ್ತಿಗೆ ಭಾಜನರಾದ ದುಸಗಿಯ ಪೈಲ್ವಾನ್ ಮಂಜುನಾಥ ನಾಗೇಂದ್ರ ಗೌಡಪ್ಪನವರ

Haliyal, Uttara Kannada | Sep 29, 2025
ಹಳಿಯಾಳ : ತಾಲೂಕಿನ ದುಸಗಿ ಗ್ರಾಮದ ನಿವಾಸಿ ಪೈಲ್ವಾನ್ ಮಂಜುನಾಥ ನಾಗೇಂದ್ರ ಗೌಡಪ್ಪನವರ ಅವರು ಮೈಸೂರಿನಲ್ಲಿ ನಡೆದ 74-86 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಮೈಸೂರು ದಸರಾ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಹಳಿಯಾಳ ತಾಲೂಕಿಗೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಬಗ್ಗೆ ಇಂದು ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಇವರು ಹಳಿಯಾಳ ಕುಸ್ತಿ ತರಬೇತಿ ಕೇಂದ್ರದಲ್ಲಿ ಈ ಹಿಂದೆ ತರಬೇತಿಯನ್ನು ಪಡೆದಿದ್ದರು. ಇವರ ಸಾಧನೆಗೆ ಕ್ಷೇತ್ರದ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಹಾಗೂ ಹಳಿಯಾಳದ ಕುಸ್ತಿ ತರಬೇತಿ ಕೇಂದ್ರದ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Read More News
T & CPrivacy PolicyContact Us