ನಮ್ಮ ಮೇಲೆ ನಂಬಿಕೆ ಇಲ್ಲದೆ ಇದ್ದರೆ ನಿಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಿ. ನಾವೆಲ್ಲಾ ಅಧಿಕಾರಿ, ಸಿಬ್ಬಂದಿಗಳು ಹೊರಗೆ ಹೋಗುತ್ತೇವೆ. ನಾವು ತಪ್ಪು ಮಾಡಿದರೆ ಎಂತಹ ತನಿಕೆಗೂ ನಾವು ಸಿದ್ದರಿದ್ದೇವೆ ಅನಗತ್ಯ ನಮ್ಮ ವಿರುದ್ಧ ಆರೋಪ ಮಾಡಿದರೆ ಸಹಿಸಿಕೊಂಡು ಇರುವುದಿಲ್ಲ ಎಂದು ಸಾಗರದ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಖಡಕ್ ಎಚ್ಚರಿಕೆ ನೀಡಿರುವ ಘಟನೆ ಶುಕ್ರವಾರ ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.