ರೈತರನ್ನ ಬೆದರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಈ ಕೂಡಲೇ ರೈತರ ಕ್ಷಮೆ ಕೇಳಬೇಕು ಅಂತ ಹೇಳಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ್ ಆಗ್ರಹಿಸಿದ್ದರು.ಹೊಸೂರು ಗ್ರಾಮದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರೈತರು ತಮ್ಮ ಅಹವಾಲುಗಳನ್ನ ಸಲ್ಲಿಸಲಿಕ್ಕೆ ಬಂದಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಮೇಲೆ ಗದರಿದ್ದಾರೆ. ರೈತರ ಜೊತೆಗೆ ಸೌಜನ್ಯದಿಂದ ಮಾತನಾಡುವಂತ ಕೆಲಸವನ್ನು ಕೂಡ ಮಾಡಿಲ್ಲ ಹಾಗಾಗಿ ಕ್ಷಮೆ ಕೇಳಬೇಕು ಅಂತ ಹೇಳಿ ಒತ್ತಾಯಿಸಿದರು.