ಚಿಕ್ಕಬಳ್ಳಾಪುರ ನಗರದಲ್ಲಿ ಇಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್ಎಂ ರೇವಣ್ಣರವರು ಮಾಧ್ಯಮದವರೊಂದಿಗೆ ಮಾತನಾಡಿ ಬಿಜೆಪಿ ನವರು ಕೇವಲ ಬಾಯಿ ಮಾತಿನಲ್ಲಿ ಮತ್ತು ಭಾಷಣಗಳಲ್ಲಿ ಮಾತ್ರ ಜನಪರ ಎಂದು ಮಾತನಾಡುತ್ತಾರೆ. ಆದರೆ ಎಲ್ಲಾ ಕಾರ್ಯಗಳು ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಗೆಯೇ ಜೆಡಿಎಸ್ ನವರು ಇಸ್ಪೀಟು ಜೂಜಾಟದಲ್ಲಿ ಜೋಕರ್ ಇದ್ದಂತೆ,ಅವರು ರಾಜಕೀಯ ಲಾಭಕ್ಕಾಗಿ ಎಲ್ಲಾ ಕಡೆ ಇರುತ್ತಾರೆ ಎಂದರು.