ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಷ್ಟೂರ ಗ್ರಾಮದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು ಇದರಿಂದ ಗ್ರಾಮದ ಜನರು ಸೊಳ್ಳೆಯಿಂದ ಹೆದರಿ ಮನೆಯಿಂದ ಹೊರಬರಲಾರದಂತಾಗಿದೆ. ಸೋಮವಾರ ಸಂಜೆ ಮುಷ್ಟೂರ ಗ್ರಾಮದಲ್ಲಿ ಎಲ್ಲಿ ನೋಡಿದಲ್ಲಿ ಹೊಗೆ ಕಾಣಿಸುತ್ತಿದ್ದು ಗ್ರಾಮದಲ್ಲಿರುವ ಹೊಗೆ ಹಾಕುವ ಮೂಲಕ ಸೊಳ್ಳೆಗಳ ನಿರ್ಮೂಲನೆಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಬಾಗಿಂಗ್ ಮಾಡದೇ ಇರುವುದರಿಂದ ಜನ ಸೊಳ್ಳೆಗಳಿಗೆ ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.