ಹಳಿಯಾಳ : ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಇಂದು ಮಂಗಳವಾರ ನಡೆದ ಸಾರ್ವಜನಿಕ ಅನ್ನಸಂತಪಣೆಯಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಪತ್ನಿ ರಾಧಾಬಾಯಿ ದೇಶಪಾಂಡೆಯವರ ಜೊತೆ ತೆರಳಿ, ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಯ ದರ್ಶನವನ್ನು ಪಡೆದು ಪ್ರಾರ್ಥನೆಯನ್ನು ಸಲ್ಲಿಸಿದರು. ಆನಂತರ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ ಆರ್.ವಿ.ದೇಶಪಾಂಡೆಯವರು ಭಕ್ತಾದಿಗಳಿಗೆ ಅನ್ನ ಬಡಿಸಿದರೆ, ಇತ್ತ ಅವರ ಮಡದಿ ರಾಧಾಬಾಯಿ ಅವರು ಸಾಂಬರ್ ಬಡಿಸಿ ಎಲ್ಲರ ಗಮನ ಸೆಳೆದರು.