ಜಮೀನಿನ ತಂತಿ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು, ಅದನ್ನ ಮುಟ್ಟಿದ ಬಾಲಕ ಹಾಗೂ ಈತನನ್ನು ಬಚಾವ್ ಮಾಡಲು ಹೋದ ಅಜ್ಜಿ ಇಬ್ಬರು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಚೊಟ್ಟನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಚೊಟ್ಟನಹಳ್ಳಿ ಗ್ರಾಮದ 52 ವರ್ಷದ ಲತಾ ಹಾಗೂ ಇವರ ಮೊಮ್ಮಗ 14 ವರ್ಷದ ಹೇಮಂತ್ ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.ಈ ಅವಘಡ ಗುರುವಾರ ಮಧ್ಯಾಹ್ನ ಸುಮಾರು 3 ರ ಸಮಯದಲ್ಲಿ ನಡೆದಿದೆ.ಲತಾ ಅವರ ಜಮೀನಿಗೆ ಹೊಂದಿಕೊಂಡಂತೆ ನೆರೆಯ ವ್ಯಕ್ತಿಯ ತಮ್ಮ ಜಮೀನಿಗೆ ತಂತಿ ಬೆಲೆ ಹಾಕಿದ್ದಾರೆ ಲತಾ ಅವರು ತಮ್ಮ ಮೊಮ್ಮಗನನ್ನ ಬೇಲಿ ಪಕ್ಕ ಕೂರಿಸಿ ಅವರು ತಮ್ಮ ಜಮೀನಿನಲ್ಲಿ ರಾಗಿ ನಾಟಿ ಮಾಡುತ್ತಿದ್ದರು.