ನನ್ನ ಹೇಳಿಕೆಯನ್ನು ಪೂರ್ಣ ಮಾತನಾಡಿದ್ದನ್ನ ತೋರಿಸದೆ ಅರ್ಧ ತಿರುಚಿ ಹಾಕಲಾಗಿದೆ ಎಂದು ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಭದ್ರಾವತಿಯಲ್ಲಿ ಸುಮಾರು ವರ್ಷಗಳಿಂದ ಎಲ್ಲಾ ಹಬ್ಬಗಳು ಶಾಂತಿಯಿಂದ ನಡೆದು ಬಂದಿದೆ.ಹಿಂದೂ ಆಗಿ ಹಿಂದೂ ಆಚರಣೆ. ಮುಸ್ಲಿಂ ಆಗಿ ಮುಸ್ಲಿಂ ಆಚರಣೆ ಅಂದಿದ್ದೇನೆ. ಕೆಲ ಕಿಡಿಗೇಡಿಗಳು ವಿಡಿಯೋವನ್ನು ತಿರುಚಿದ್ದಾರೆ. ಬಿಜೆಪಿಗರು ಭದ್ರಾವತಿಯ ಶಾಂತಿ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.