ದೇವರ ಮೂರ್ತಿಗೆ ಹಾಕಿದ್ದ ಆಭರಣಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದಲ್ಲಿ ನಡೆದಿದೆ. ನಂಜದೇವನಪುರದ ಉಯ್ಯಂಬಳ್ಳಿ ಮಾರಮ್ಮ ದೇಗುಲದಲ್ಲಿ ಈ ಕಳವು ಪ್ರಕರಣ ನಡೆದಿದ್ದು ಗರ್ಭಗುಡಿಯ ಬಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಚಿನ್ನದ ತಾಳಿ, ಮಾಂಗಲ್ಯ ಸರ ಸೇರಿ 57 ಗ್ರಾಂ ಆಭರಣ ಕದ್ದಿದ್ದಾರೆ. ಹುಂಡಿ ಇದ್ದ ರೀತಿಯೇ ಇದೆ. ಅರ್ಚಕರು ಪೂಜೆಗೆಂದು ಬಂದಾಗ ಈ ಕಳ್ಳತನ ಬಯಲಿಗೆ ಬಂದಿದ್ದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು, ಶ್ವಾನದಳ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.