ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ 200 ಕ್ಕೂ ಹೆಚ್ಚು ಕುರಿಗಳು..! ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದ ಕಂಗಾಲಾದ ಮಾಲೀಕರು... ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮೇಲಿನ ಗಡ್ಡಿಯ ಕುರಿ ಕಾಯಿಗಳು ಎಂದಿನಂತೆ ತಮ್ಮ ಕುರಿಗಳನ್ನು ನದಿ ತಟದಲ್ಲಿ ಮೇಯಿಸಲು ತೆರಳಿದಾಗ ಏಕಾಏಕಿ ನದಿ ನೀರು ಬಂದಿದೆ. ಇದರಿಂದಾಗಿ 200ಕ್ಕೂ ಹೆಚ್ಚು ಕುರಿಗಳು ನೀರಿನಲ್ಲಿ ಕೊಚ್ಚು ಹೋಗಿರುವ ಘಟನೆ ನಡೆದಿದೆ. ಕೃಷ್ಣಾ ಜಲನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿರುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೃಷ್ಣೆಯು ಮೈದುಂಬಿ ಹರಿಯುತ್ತಿದ್ದು ಸರ್ಕಾರದ ಎಚ್ಚರಿಕೆಯ ನಡುವೆಯ