ಮೊಳಕಾಲ್ಮುರು:-ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಜಿಪಂ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ,ಆರು ತಿಂಗಳ ಒಳಗಾಗಿ ನಾನು ಮಂತ್ರಿಯಾಗ್ತೀನಿ ಅಂತ ಸ್ವಾಮೀಜಿಗಳು ಭವಿಷ್ಯ ಹೇಳಿದ್ದಾರೆ.ಕಾಲ ಕೂಡಿ ಬಂದಿದೆ ಇದು ಒಳ್ಳೇ ಸಂದರ್ಭ ದೆಹಲಿಗೆ ಹೋಗೋಣ ಅಂತ ಕಾರ್ಯಕರ್ತರು ಹೇಳಿದ್ರು. ಹಣೆ ಬರಹದಲ್ಲಿ ಏನು ಬರುತ್ತೋ ಅದು ಆಗುತ್ತೆ,ಏನು ಆಗೋದಿಲ್ಲ ಅದು ಆಗೋದಿಲ್ಲ.