ಮೊಳಕಾಲ್ಮುರು ತಾಲೂಕಿನ 150 ಎ ರಾಷ್ಟ್ರೀಯ ಹೆದ್ದಾರಿ ಬಿ.ಜಿ.ಕೆರೆ ಎಚ್ ಪಿ ಪೆಟ್ರೋಲ್ ಬಂಕ್ ಸಮೀಪದಲ್ಲಿ ಮಂಗಳವಾರ ಬೆಳಿಗ್ಗೆ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗಳನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅರ್ಜುನ ಚಿನ್ನೇನಹಳ್ಳಿಯ ಡಿ.ಕರಿಬಸಪ್ಪ(23), ದಾವಣಗೆರೆ ನಗರದ ಎಪಿಎಂಸಿಯ ಅನನ್ಯ ಪಾರ್ಸಲ್ ಸರ್ವಿಸಸ್ ಅಂಗಡಿಯ ಎ.ಡಿ.ಕುಮಾರಗೌಡ(45) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್‌ಪಿ ಡಾ.ಶಿವಕುಮಾರ್, ತಳಕು ಸಿಪಿಐ ಹನುಮಂತಪ್ಪ ಸಿರೇಹಳ್ಳಿ, ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.