ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಅಭಿಮಾನಿಗಳು ಮೃತಪಟ್ಟಿರುವ ಹಿನ್ನೆಲೆ, ರಾಜ್ಯ ಸರ್ಕಾರದ ಅವ್ಯವಸ್ಥೆ ಎಂದು ಆರೋಪಿಸಿ ಬಿಜೆಪಿ ಯುವ ಮೊರ್ಚ ರಾಜ್ಯಾಧ್ಯಕ್ಷ ದೀರಜ್ ಮುನಿರಾಜ್ ಕಿಡಿಕಾರಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚ ರಾಜ್ಯಾಧ್ಯಕ್ಷ ದೀರಾಜ್ ಮುನಿರಾಜು ಅವರು ದೇವನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೆನ್ನೆ ಆದ ಬಾರೀ ದುರಂತಕ್ಕೆ ರಾಜ್ಯ ನಾಯಕರ ರಾಜೀನಾಮೆಗೆ ಶಾಸಕ ದೀರಜ್ ಮುನಿರಾಜ್ ಅವರು ಪಟ್ಟು ಹಿಡಿದರು. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಕೊಡಬೇಕು. ಈ ಸಾವುಗಳಿಗೆ ನೇರವಾಗಿ ಕಾಂಗ್ರೇಸ್ ಸರ್ಕಾರವೇ ಕಾರಣ.