ಸುರಪುರದ ಅಂಬೇಡ್ಕರ್ ಮೂರ್ತಿ ಹಿಂಭಾಗದಲ್ಲಿನ ಭೂಮಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ವೃತ್ತದ ನಿವೇಶನ ಭೂಮಿ ಮಂಜುನಾಥ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳು ಒಕ್ಕೂಟ ಸುರಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಆರಂಭಿಸಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ತಡರಾತ್ರಿ ಮುಂದುವರೆದಿದೆ. ಧರಣಿಯಲ್ಲಿ ಅನೇಕರು ಭಾಗವಹಿಸಿ ರಾತ್ರಿ ವೇಳೆಯಲ್ಲಿಯೂ ಜಾಗರಣೆ ಮಾಡುತ್ತಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ.