Download Now Banner

This browser does not support the video element.

ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿ ಬಿದ್ದ ಹೊಂಡ ಮುಚ್ಚಿ ದುರಸ್ತಿಗೆ ಆಗ್ರಹಿಸಿದ ಅಟಲ್ ಅಭಿಮಾನಿ ಸಂಘಟನೆ

Dandeli, Uttara Kannada | Aug 21, 2025
ದಾಂಡೇಲಿ : ನಗರದ ಪ್ರಮುಖ ರಸ್ತೆಯಾಗಿರುವ ಜೆ ಎನ್ ರಸ್ತೆಯಲ್ಲಿ ಸಾಕಷ್ಟು ಹೊಂಡ ಗುಂಡಿಗಳು ನಿರ್ಮಾಣವಾಗಿ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಹಿನ್ನಲೆಯಲ್ಲಿ ನಗರದ ಅಟಲ್ ಅಭಿಮಾನಿ ಸಂಘಟನೆಯು ಇಂದು ಗುರುವಾರ ಸಂಜೆ 6:30 ಗಂಟೆ ಸುಮಾರಿಗೆ ರಸ್ತೆಯಲ್ಲಿರುವ ಹೊಂಡಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ನಗರದ ಅಟಲ್ ಅಭಿಮಾನಿ ಸಂಘಟನೆಯು ರಸ್ತೆ ದುರಸ್ತಿಗೆ ವಿನೂತನ ರೀತಿಯಲ್ಲಿ ಆಗ್ರಹಿಸಿದೆ. ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯದಲ್ಲಿ ಪಾಂಡುರಂಗ ಮೋಟ್ರಾಚೆ, ಸಂಜಯ್ ಘೋರ್ಪಡೆ, ಮಂಜು ಯರಗೇರಿ, ಆನಂದ ಭೋವಿವಡ್ಡರ, ಸತ್ತಾರ, ಶಬೀರ್, ಮೆಹಬೂಬ ಕೊಪ್ಪದ, ಮೆಹಬೂಬು ಪಠಾಣ, ಶಕೀಲ್ ಮೊದಲಾದವರಿದ್ದರು.
Read More News
T & CPrivacy PolicyContact Us