ಇನ್ನು ಐದು ವರ್ಷದಲ್ಲಿ ರಾಜಹಂಸಗಡ ಉತ್ಕೃಷ್ಟ ಪ್ರವಾಸಿ ಕೇಂದ್ರವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿ ತಾಲೂಕಿನ ರಾಜಹಂಸಗಡ ಗ್ರಾಮದಲ್ಲಿ ನೂತನ ಶ್ರೀ ಮರಗಾಯಿ ಮೂರ್ತಿಯ ಪ್ರತಿಷ್ಠಾಪಣೆ ಹಾಗೂ ಮಹಾಪ್ರಸಾದ ಸೇವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜಹಂಸಗಡ ಕೊಟೆಯಲ್ಲಿ ಛತ್ರಪತಿ ಶಿವಾಜಿಯ ಬೃಹತ್ ಮೂರ್ತಿ ಪ್ರತಿಷ್ಠಾಪನೆಯ ನಂತರ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಮುಂದಿನ 5 ವರ್ಷದಲ್ಲಿ ಇದೊಂದು ಉತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯುವ ಜೊತೆಗೆ, ಗ್ರಾಮವೂ ಸಾಕಷ್ಟು ಅಭಿವೃದ್ದಿಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು