ಮಳವಳ್ಳಿ : ಆಟೋ ವೊಂದು ಉರುಳಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುವಕ ನೋರ್ವ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿರುವ ದುರ್ಘಟನೆ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ಗಂಗಾಮತ ಬೀದಿಯ ವಾಸಿ ಲೇ ಮಹದೇವ ಎಂಬುವರ ಮಗನಾದ 28 ವರ್ಷದ ಶಿವು ಎಂಬಾತನೇ ಮೃತಪಟ್ಟ ದುರ್ದೈವಿ ಯಾಗಿದ್ದು ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಪಟ್ಟಣದ ಬೀರೇಶ್ವರ ದೇವಸ್ಥಾನದ ರಸ್ತೆ ಯಲ್ಲಿ ಈ ಘಟನೆ ಜರುಗಿದೆ. ಗಣೇಶನ ಕೂರಿಸುವ ವೇದಿಕೆ ನಿರ್ಮಾಣಕ್ಕೆ ಮಣ್ಣು ತರಲು ಹೋಗಿದ್ದ ಶಿವು ಆಟೋದಲ್ಲಿ ವಾಪಸ್ ಬರುತ್ತಿದ್ದ ವೇಳೆ ಆಟೋ ಉರುಳಿ ಬಿದ್ದು ತೀವ್ರವಾಗಿ ಗಾಯ ಗೊಂಡಿದ್ದ ಈತನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.