ಬಿಜೆಪಿ ಹೈ ಕಮಾಂಡ್ ಗೆ ಶಾಸಕ ಯತ್ನಾಳ ಪತ್ರ ಬರೆದಿದ್ದಾರೆ ಎಂಬ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿ ನಾನು ಯಾಕೆ ಪತ್ರ ಬರೆಯಲಿ, ವಿಜಯೇಂದ್ರ ಕೆಲ ಮಾದ್ಯಮಗಳಿಗೆ ನನ್ನ ಡ್ಯಾಮೇಜ್ ಮಾಡುವ ಸಲುವಾಗಿ ಹೇಳಿರುತ್ತಾನೆ. ನ ದೈನಂ ನ ಪಲಾಯನಂ, ನನ್ನದು ತಪ್ಪಾಗಿದೆ ಕ್ಷಮೆ ಮಾಡ್ರೀ, ಯಡಿಯೂರಪ್ಪ ಕುಟುಂಬಕ್ಕೆ ಏನು ಅನ್ನಲ್ಲ ಅನ್ನುವನು ನಾನಲ್ಲ. ಅಷ್ಟೊಂದು ತಲೆ ಕೆಳಗೆ ಹಾಕಿ ನಾನು ಬಿಜೆಪಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು..