ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಲಾರಿ ಡ್ರೈವರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿಯ ಅಕ್ರಮ ಸಂಬಂಧ ವಿಚಾರಕ್ಕೆ ಪತಿ ರಿಯಾಜ್ ಮಿಯ್ಯಾನನ್ನ ಕಬ್ಬಿಣದ ಪೈಪ್‌ನಿಂದ ಹೊಡೆದು ಹತ್ಯೆ ಮಾಡಲಾಗಿದೆಯೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ. ಸೆ10 ರಂದು ಬೆಳಗ್ಗೆ 10.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ರಿಯಾಜ್ ಮೀಯ್ಯಾ ಪತ್ನಿ ಹಾಗೂ ರಿಯಾನ ಬೇಗಂ ಮದ್ಯೆ ಅನೈತಿಕ ಸಂಬಂಧ ವಿಚಾರಕ್ಕೆ, ಪತಿ ಪತ್ನಿ ಮದ್ಯೆ ಜಗಳ ನಡೆದಿತ್ತು ಬಳಿಕ ಈ ವಿಚಾರ ಜಹೀರನಿಗೆ ಗೋತ್ತಾಗಿದ್ದು, ಇದೇ ವಿಚಾರಕ್ಕೆ ರಿಯಾಜ್ ಮಿಯ್ಯನನ್ನ ಹತ್ಯೆ ಮಾಡಲಾಗಿದೆ ಅಂತಾ ಎಸ್ಪಿ ಶ್ರೀನಿವಾಸುಲು ಹೇಳಿದ್ದಾರೆ