ನಗರದಲ್ಲಿ ನವದೆಹಲಿಯ ಕಾರುಗಳ ದರ್ಬಾರ್ ಹೆಚ್ಚಿದೆ. ಹೊಸದಿಲ್ಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ಕಾರುಗಳ ನಿಷೇಧ ಆದೇಶ ಹೊರಡಿಸಿರುವ ಬೆನ್ನಲ್ಲೇ, ಉತ್ತಮ ಸ್ಥಿತಿಯಲ್ಲಿರುವ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಹೊರ ರಾಜ್ಯಗಳ ಗ್ರಾಹಕರು ಅಗ್ಗದ ದರದಲ್ಲಿ ಕಾರುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಸಿಂಧನೂರು ನಗರದ ಬಸವಲಿಂಗಪ್ಪ ಅವರು , ' ಹೊಸದಿಲ್ಲಿಯಲ್ಲಿ 10 ವರ್ಷ ಹಳೆಯ ಕಾರುಗಳ ಬಳಕೆ ನಿಷೇಧದಿಂದಾಗಿ 12 ಲಕ್ಷ ರೂಪಾಯಿ. ಬೆಲೆ ಬಾಳುವ ಕಾರನ್ನು ಅರ್ಧ ದರಕ್ಕೆ ತಂದಿದ್ದೇವೆ . ನಮ್ಮ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ ಸಂಖ್ಯೆ ನೋಂದಣಿ ಮಾಡಿಸಿದ್ದೇವೆ ಎಂದು ಆಗಸ್ಟ್ 23 ರ ಶನಿವಾರ ಪಬ್ಲಿಕ್ ಆಪ್ ಜೊತೆ ಮಾತನಾಡಿ ತಿಳಿಸಿದ್ದಾರೆ .