ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿದ್ದು, ಮುಷ್ಕರದ ಮದ್ಯೆಯೂ ಬಸ್‌ಗಳು ಸಂಚಾರ ನಡೆಸ್ತಿರೋ ಹಿನ್ನಲೆಯಲ್ಲಿ ಆಗಷ್ಟ್ 5 ರಂದು ಬೆಳಗ್ಗೆ 7 ಗಂಟೆಗೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.. ಮುಷ್ಕರದ ಮಧ್ಯೆಯೂ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ವಿವಿಧೆಡೆ ಬಸ್‌ಗಳು ಸಂಚಾರ ನಡೆಸ್ತಿರೋ ಹಿನ್ನಲೆಯಲ್ಲಿ ಎಷ್ಟು ಬಸ್‌ಗಳು ಸಂಚಾರ ಮಾಡ್ತಿವೆ.. ಹಾಗೂ ಭದ್ರತೆ ಯಾವ ರೀತಿ ಕಲ್ಪಿಸಲಾಗಿದೆ ಅನ್ನೊದರ ಬಗ್ಗೆ ಮಾಹಿತಿ ಪಡೆದಿದ್ದಾರೆ.